Filtra per genere
- 80 - Mankutimmana Kagga 187Thu, 11 Jan 2024 - 11min
- 79 - Mankutimmana Kagga 566Wed, 10 Jan 2024 - 08min
- 78 - Mankutimmana Kagga 553Tue, 09 Jan 2024 - 09min
- 77 - Mukundamala Stotra
Mukunda mAla stotram: Gita-God-Hinduism: MukundamAla Stotram
Mon, 18 Oct 2021 - 21min - 76 - Mankutimmana Kagga - 84
ಅಣು ಭೂತ ಭೂಗೋಳ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕಂತುಕವನದರೊ||
ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || 84
ಅಣು = ಅತ್ಯನ್ತ ಸಣ್ಣದಾದದ್ದು ಭೂತ = (ಇಲ್ಲಿ) ಬೃಹತ್ತಾದದು, ತಾರಾಂಬರಾದಿಗಳ = ನಕ್ಷತ್ರ ಗಗನಗಳು, ಅಣಿಮಾಡಿ = ಸಿದ್ಧಪಡಿಸಿ, ಬಿಗಿದು = ಒಂದು ಸೂತ್ರದಲ್ಲಿ ಬಂದಿಸಿ, ನಸು = ಸ್ವಲ್ಪ, ಸಡಿಲವನುಮಿರಿಸಿ = ಸಡಿಲವನು ಇರಿಸಿ, ಕೃತಿಕಂತುಕವನದರೊಳಣಗಿರ್ದು= ಅವನು ಮಾಡಿದ ಈ ಸೃಷ್ಟಿಯೆಂಬ ಚೆಂಡಿನೊಳಗೆ ತಾನೂ ಸೇರಿಕೊಂಡು.
Tue, 03 Aug 2021 - 07min - 75 - Mankutimmana Kagga - 361
ಧಾರಿಣಿಯ ವಾಸಿಗಳ್ಗಿಹುದೊಂದು ಹಿತವಾರ್ತೆ |
ಆರವ್ಯುದಾರ್ತರ್ ಅತ್ಯಾರ್ತರಾಪದವ॥
ರೌರವಿಗೆ ಹಿತ ಮಹಾರೌರವಿಯ ಗೋಳುದನಿ ।
ನಾರಕದೊಳದುಪಾಯ – ಮಂಕುತಿಮ್ಮ ॥ 361ವಾಸಿಗಳ್ಗಿಹುದೊಂದು = ವಾಸಿಗಳಿಗೆ+ಇಹುದು+ಒಂದು, ಆರವ್ಯುದಾರ್ತರ್ = ಆರವ್ಯುದು+ಆರ್ತರ್, ಅತ್ಯಾರ್ತರಾಪದವ = ಅತಿ+ಆರ್ತರ+ಆಪದವ, ನಾರಕದೊಳುದುಪಾಯ= ನಾರಕದೊಳು+ಅದು+ಉಪಾಯ.
ಧಾರಿಣಿ = ಭೂಮಿ, ಜಗತ್ತು, ಆರವ್ಯುದು = ವಿಚಾರಮಾಡುವುದು,ಆರ್ತರ್=ಸಂಕಟದಿಂದ ಗೋಳಾಡುವವರು, ಅತ್ಯಾರ್ತರ್= ಅತಿಯಾಗಿ ಗೋಳಾಡುವವರು, ರೌರವಿ=ನರಕದಂತ ಕಷ್ಟ ಅನುಭವಿಸುವವನು, ನಾರಕದೊಳುದುಪಾಯ=ಹಿಂಸೆಯಲ್ಲೂ ಒಂದು ಉಪಾಯ.
Thu, 22 Jul 2021 - 07min - 74 - Mankutimmana Kagga - 451
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ ।
ಶೈಲದಚಲತೆಯಿರಲು ಝರಿಯ ವೇಗ ಸೊಗ ।।
ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು ।
ವೈಲಕ್ಷಣದೇ ಚೆಂದ – ಮಂಕುತಿಮ್ಮ ।। 451
ವಿಸ್ತರವಿರಲು=ವಿಸ್ತರವು+ಇರಲು ಶೈಲದಚಲತೆಯಿರಲು=ಶೈಲದ ಅಚಲತೆ+ಇರಲು,
ಬಯಲಂತಿರಲು=ಬಯಲಂತೆ+ಇರಲು, ಮನೆಯಚ್ಚುಕಟ್ಟಿಂಬು=ಮನೆಯ+ಅಚ್ಚುಕಟ್ಟು+ಇಂಬು
ನೀಲ=ಆಕಾಶ, ಸೊಗ=ಸೊಗಸು-ಚೆಂದ, ಝರಿಯ= ದುಮ್ಮಿಕ್ಕುವ ಜಲಪಾತ, ವೈಲಕ್ಷಣದೇ=ವೈವಿಧ್ಯತೆಯೇ
Mon, 19 Jul 2021 - 06min - 73 - Mankutimmana Kagga - 156Sun, 18 Jul 2021 - 07min
- 72 - Mankutimmana Kagga - 535
ನೀರ ನೆರೆ ತನ್ನೆದುರಿನಣೆಕಟ್ಟನೊಡೆಯುವುದು ।
ಊರನದು ಕೊಚ್ಚುವುದು ಬದಿಯ ಕಟ್ಟದಿರೆ ।।
ಏರಿಗಳನಿಕ್ಕೆಲದಿ ನಿಲಿಸೆ ಹರಿಯುವುದು ಸಮನೆ ।
ಪೌರುಷದ ನದಿಯಂತು – ಮಂಕುತಿಮ್ಮ ।। 535 ।।
ತನ್ನೆದುರಿನಣೆಕಟ್ಟನೊಡೆಯುವುದು – ತನ್ನ+ಎಂದುರಿನ+ಅಣೆಕಟ್ಟನ್ನು+ಒಡೆಯುವುದು, ಊರನದು = ಊರನ್ನು+ಅದು, ಕಟ್ಟದಿರೆ=ಕಟ್ಟದೆ+ಇರೆ, ಏರಿಗಳನಿಕ್ಕೆಲದಿ =ಏರಿಗಳನು+ಇಕ್ಕೆಲದಿ,ನದಿಯಂತು=ನದಿಯು+ಅಂತು,
ನೆರೆ=ಪ್ರವಾಹ, ಬದಿಯ=ಪಕ್ಕದ, ಇಕ್ಕೆಲದಿ=ಎರಡೂ ಕಡೆ, ನಿಲಿಸೆ=ನಿಲ್ಲಿಸಲು, ಪೌರುಷದ=ಶಕ್ತಿಯ
Tue, 13 Jul 2021 - 07min - 71 - Mankutimmana Kagga -132-131
ರಾಮನುಚ್ವಾಸವಲೆದಿರದೆ ರಾವಣನೆಡೆಗೆ |
ರಾಮನುಂ ದಶಕಂಠನೆಲರನುಸಿರಿರನೆ ||
ರಾಮರಾವಣರಿಸಿರ್ಗಳಿಂದು ನಮ್ಮೊಳಗಿರವೇ? |
ಭೂಮಿಯಲಿ ಪೋಸತೇನೋ ? – ಮಂಕುತಿಮ್ಮ || 132 ||
ರಾಮನುಚ್ವಾಸವಲೆದಿರದೆ = ರಾಮನ + ಉಚ್ವಾಸವು+ ಅಲೆದಿರದೆ// ರಾವಣನೆಡೆಗೆ = ರಾವಣನ ಎಡೆಗೆ//ದಶಕಂಠನೆಲರನುಸಿರಿರನೆ = ದಶ + ಕಂಠನ + ಎಲರನು+ ಉಸಿರಿರನೆ//
ರಾಮರಾವಣರುಸಿರ್ಗಳಿಂದು = ರಾಮ + ರಾವಣರ + ಉಸಿರುಗಳು + ಇಂದು // ನಮ್ಮೊಳಗಿರವೇ = ನಮ್ಮೊಳಗೇ + ಇರವೇ // ಪೋಸತೇನೋ = ಪೊಸತು + ಏನೋ
ಎಲರನು = ಗಾಳಿಯನು // ಉಚ್ವಾಸವು = ಶ್ವಾಶದ ಗಾಳಿ // ಪೋಸತೇನೋ = ಹೊಸದೇನೋ?
ಪುಲಿಸಿಂಘದುಚ್ವಾಸ, ಹಸು ಹುಲ್ಲೆ ಹಯದುಸಿರು |
ಹುಳು ಹಾವಿಲಿಯಸುಯ್ಲು, ಹಕ್ಕಿ ಹದ್ದುಯ್ಲು ||
ಕಲೆತಿರ್ಪುವೀಯಲ್ಲ ನಾಮುಸಿರ್ವೆಲರಿನಲಿ |
ಕಲಬೆರಕೆ ಜಗದುಸಿರು – ಮಂಕುತಿಮ್ಮ || 131
Sat, 10 Jul 2021 - 06min - 70 - Manktuimmana Kagga - 771Fri, 09 Jul 2021 - 06min
- 69 - Mankutimmana Kagga - 27Thu, 08 Jul 2021 - 07min
- 68 - Mankutimmana Kagga - 113
ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ |
ಗುಣಿಸುವನು ಭೂತಶಕ್ತಿಗಳನದರಿಂದೇಂ ||
ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ವ |
ವಣಗಿಹುದು ಮೂಲವದು – ಮಂಕುತಿಮ್ಮ|| 113
ಅಣುಸಂಖ್ಯೆಯೆಣಿಸುವನು = ಅಣುಸಂಖ್ಯೆಯನು + ಎಣಿಸುವನು | ಭೂತಶಕ್ತಿಗಳನದರಿಂದೇಂ = ಭೂತ + ಶಕ್ತಿಗಳನು + ಅದರಿಂದ+ ಏನು|
ಗಣಿತಸಾಧ್ಯದ = ಗಣಿತ + ಸಾಧ್ಯದ | ಹಿಂದಗಣ್ಯದ = ಹಿಂದೆ+ ಅಗಣ್ಯದ | ಮಹತತ್ವವಣಗಿಹುದು= ಮಹತತ್ವವವು + ಅನಗಿಹುದು | ಮೂಲವದು = ಮೂಲವು + ಅದು
Wed, 07 Jul 2021 - 07min - 67 - Mankutimmana Kagga - 482Mon, 05 Jul 2021 - 07min
- 66 - Mankutimmana Kagga - 678Thu, 24 Jun 2021 - 08min
- 65 - Mankutimmana Kagga - 151Wed, 23 Jun 2021 - 06min
- 64 - Mankutimmana Kagga - 505
ದೈವಕೃಪೆಯನುವುದೇಂ? ಪರಸತ್ವನವವೃಷ್ಟಿ ।
ಜೀವಗುಣ ಪಕ್ವಪಟ್ಟಂತದರ ವೇಗ ।।
ಭಾವಚೋದನೆಗಳಲಿ ಭಾಹ್ಯಸಾಧನೆಗಳಲಿ।
ತೀವಿ ದೊರೆಕೊಳುವುದದು – ಮಂಕುತಿಮ್ಮ ।। 505
ದೈವಕೃಪೆಯನುವುದೇಂ=ದೈವಕೃಪೆ+ಎನುವುದು+ಅದೇಂ, ಪಕ್ವಪಟ್ಟಂತದರ=ಪಕ್ವ+ಪಟ್ಟಂತೆ+ಅದರ, ದೊರೆಕೊಳುವುದದು=ದೊರೆ+ಕೊಳುವುದು+ಅದು
ಪರಸತ್ವನವವೃಷ್ಟಿ= ಪರಮಾತ್ಮನ ನಿತ್ಯನೂತನ ಕೃಪಾಧಾರೆ, ಭಾವಚೋದನೆ= ಅಂತರಂಗದ ಆಲೋಚನೆಗಳಲ್ಲಿ, ಪಕ್ವಪಟ್ಟಂತೆ=ಅನುಭವಿಗಳಾದಂತೆ ದೊರೆಕೊಳುವು=ಸಿಗುವುದು,
Tue, 22 Jun 2021 - 07min - 63 - Mankutimmana Kagga - 561 - 560 - 559
ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ ।
ಕುಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ।।
ಎಂದೆಂದುಮಶ್ವತ್ತ ಹಳೆಹೊಸದು, ತಾನದಾ ।
ಸ್ಪಂದನವೋ ಬ್ರಹ್ಮನದು – ಮಂಕುತಿಮ್ಮ || 561
ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ ।
ತೀವಿರ್ಪುದದು ಕೆಳಗೆ ನಮ್ಮ ಲೋಕದಲ್ಲಿ ।।
ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು ।
ಸಾವು ಮರಕೇನಿಲ್ಲ – ಮಂಕುತಿಮ್ಮ।। 560ಪರಮಪದದಲಿ ನೋಡು; ಬೇರುಗಳ್ ವ್ಯೋಮದಲಿ ।
ಧರೆಗಿಳಿದ ಕೊಂಬೆರೆಂಬೆಗಳು, ಬಿಳಲುಗಳು ।।
ಚಿರಜೀವಿವೃಕ್ಷವಿದು ವಿಶ್ವಜೀವಾಶ್ವತ್ಥ ।
ಪರಿಕಿಸಿದರರ್ಥವನು – ಮಂಕುತಿಮ್ಮ।। 559
Thu, 17 Jun 2021 - 09min - 62 - Mankutimmana Kagga - 913Tue, 15 Jun 2021 - 07min
- 61 - Mankutimmana Kagga - 762Mon, 14 Jun 2021 - 08min
- 60 - Mankutimmana Kaggaa - 629Thu, 10 Jun 2021 - 05min
- 59 - Mankutimmana Kagga - 178Tue, 08 Jun 2021 - 05min
- 58 - Mankutimmana Kagga - 616Mon, 07 Jun 2021 - 05min
- 57 - Mankutimmana Kagga - 330
ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ ।
ಚೀಟಿ ತಾಂ ಬೀಳನೆನಲ್ ಆಟ ಸಾಗುವುದೆ?
ಏಟಾಯ್ತೆ ಗೆಲುವಾಯ್ತೆಂದೆಂದು ಕೇಳುವುದದೇನು
ಆಟದೋಟವೆ ಲಾಭ – ಮಂಕುತಿಮ್ಮ || 330
ಫಲವೇನು? = ಫಲವು + ಏನು?, ಬೀಳನೆನಲ್ = ಬೀಳೆನು+ಎನಲ್, ಏಟಾಯ್ತೆ=ಏಟು+ಆಯ್ತೆ, ಗೆಲುವಾಯ್ತೆಂದೆಂದು = ಗೆಲುವು+ಆಯ್ತೆ+ಎಂದು, ಕೇಳುವುದದೇನು = ಕೇಳುವುದು + ಅದೇನು ಆಟದೋಟವೆ= ಆಟದ+ಓಟವೆ,
ಕೌತುಕ = ಕುತೂಹಲ, ಚೀಟಿ = ಇಸ್ಪೀಟಿನ ಎಲೆ,
Thu, 03 Jun 2021 - 08min - 56 - Mankutimmana Kagga - 238
ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ
ತನುವಂಗಗಳೊಳೊಂದು ರೂಪ ಗುಣ ಬೇರೆ
ಮನದೊಳೊಬ್ಬೊಬ್ಬನೊಂದೊಂದು ಪ್ರಪಂಚವಿಂ
ತನುವೇಕದೊಳ್ ಬಹುಳ – ಮಂಕುತಿಮ್ಮ || 238
ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ = ಮನುಜಕುಲ + ಒಂದು +ಒಬ್ಬನು+ಇನೊಬ್ಬನಂತೆ + ಇಲ್ಲ // ತನುವಂಗಗಳೊಳೊಂದು = ತನು+ ಅಂಗಗಳು+ಒಂದು
ಮನದೊಳೊಬ್ಬೊಬ್ಬನೊಂದೊಂದು = ಮನದೊಳು+ಒಬ್ಬಬ್ಬನದು+ಒಂದೊಂದು// ಪ್ರಪಂಚವಿಂತನುವೇಕದೊಳ್ = ಪ್ರಪಂಚವು+ ಇಂತು+ಅನುವು+ಏಕದೊಳ್
ಅನುವು+ ಅನೇಕವು//
Tue, 01 Jun 2021 - 04min - 55 - Mankutimmana Kagga - 623Mon, 31 May 2021 - 06min
- 54 - Mankutimmana Kagga - 856
ರಾಮಕಾರ್ಮುಕ, ಕೃಷ್ಣಯುಕ್ತಿ, ಗೌತಮಕರುಣೆ ।
ಭೂಮಿಭಾರವನಿಳುಸೆ ಸಾಲದಾಗಿರಲು ।।
ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು? ।
ಕ್ಷೇಮವೆಂದುಂ ಮೃಗ್ಯ – ಮಂಕುತಿಮ್ಮ ।। 856
ಭೂಮಿಭಾರವನಿಳುಸೆ=ಭೂಮಿ+ಭಾರವನು+ಇಳಿಸೆ, ಸಾಲದಾಗಿರಲು=ಸಾಲದು+ಆಗಿರಲು, ಸಾಮಾನ್ಯರೆನಿತು=ಸಾಮಾನ್ಯರು+ಎನಿತು, ಪೆಣಗಿದೊಡಮೇನಹುದು=ಪೆಣಗಿದೊಡೆಮ್+ಏನು+ಅಹುದು. ಕ್ಷೇಮವೆಂದುಂ=ಕ್ಷೇಮವು+ಎಂದುಂ
ಕಾರ್ಮುಕ,= ಧನುಸ್ಸು, ಬಿಲ್ಲು, ಪೆಣಗಿದೊಡೆಮ್=ಹೆಣಗಿದರೆ, ಮೃಗ್ಯ=ಮರೀಚಿಕೆ, ಬಿಸಿಲ್ಗುದುರೆ.
Fri, 28 May 2021 - 05min - 53 - Mankutimmana Kagga - 792Thu, 27 May 2021 - 07min
- 52 - Mankutimmana Kagga - 40
ನಿಶೆಯೊಳೇ೦ ಕಾಣಬಾರನು ಹಗಲನೊಲ್ಲದೊಡೆ?
ಶಶಿರವಿಗಳವನ ಮನೆಕಿಟಕಿಯಾಗಿರರೇ೦?
ಮಸುಕುಬೆಳಕೊಂದಾದ ಸಂಜೆಮಂಜೇನವನು
ಮಿಸುಕಿ ಸುಳಿಯುವ ಸಮಯ? ಮಂಕುತಿಮ್ಮ||
ನಿಶೆಯೊಳೇ೦= ನಿಶೆಯೊಳು+ ಏಂ, ಹಗಲನೊಲ್ಲದೊಡೆ = ಹಗಲನು ಒಲ್ಲದೊಡೆ, ಮಸುಕುಬೆಳಕೊಂದಾದ = ಮಸುಕು + ಬೆಳಕು+ಒಂದಾದ, ಸಂಜೆಮಂಜೇನವನು = ಸಂಜೆ ಮಂಜೇನು+ ಅವನು
ನಿಶೆಯೊಳು= ರಾತ್ರಿಯಲಿ, ಶಶಿರವಿಗಳು= ಸೂರ್ಯ ಚಂದ್ರರು, ಮಸುಕು= ಹಗಲು ರಾತ್ರಿಗಳೊಂದಾಗುವ ವೇಳೆ, ಮಂಜೇನು= ಕಂಡೂ ಕಾಣದ, ಮಿಸುಕಿ= ಅಲೆದಾಡುವ
Wed, 26 May 2021 - 06min - 51 - Mankutimmana Kagga - 338Tue, 25 May 2021 - 08min
- 50 - Mankutimmana Kagga - 329
ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ ।
ಕಳೆವುದದರಲಿ ನಮ್ಮ ಜನುಮಜನುಮಗಳು ।।
ಗೆಲುವಾರ್ಗೋ! ಸೋಲಾರ್ಗೋ! ಲೆಕ್ಕನೋಡುವುದೆಂದೋ
ಫಲವು ಬರಿಯಾಟವೆಲೊ – ಮಂಕುತಿಮ್ಮ || 329
ಕೊನೆಯಿಲ್ಲದೀಯಾಟ= ಕೊನೆ+ಇಲ್ಲದ+ ಈ+ಆಟ, ಕಳೆವುದದರಲಿ= ಕಳೆವುದು+ಇದರಲಿ, ಗೆಲುವಾರ್ಗೋ= ಗೆಲುವು+ಯಾರಿಗೋ, ಸೋಲಾರ್ಗೋ=ಸೋಲು+ಯಾರಿಗೋ, ಲೆಕ್ಕನೋಡುವುದೆಂದೋ= ಲೆಕ್ಕ+ನೋಡುವುದು+ಎಂದೋ.
ಬರಿಯಾಟವೆಲೊ= ಬರಿಯೆ+ಆಟವು+ಎಲೊ
Fri, 21 May 2021 - 06min - 49 - Kagga - 121
ತನುವೇನು? ಮನವೇನು? ಪರಮಾಣು ಸಂಧಾನ |
ಕುಣಿಸುತಿಹುದುಭಯವನು ಮೂರನೆಯದೊಂದು ||
ತೃಣದ ಹಸುರಿನ ಹುಟ್ಟು ತಾರೆಯಸಕದ ಗುಟ್ಟು |
ದಣಿಯದದನರಸು ನೀಂ – ಮಂಕುತಿಮ್ಮ || 121
ಕುಣಿಸುತಿಹುದುಭಯವನು = ಕುಣಿಸುತಿಹುದು + ಉಭಯವನು//ಮೂರನೆಯದೊಂದು = ಮೂರನೆಯದು +ಅದೊಂದು // ತಾರೆಯಸಕದ = ತಾರೆಯ + ಎಸಕದ // ದಣಿಯದದನರಸು = ದಣಿಯದೆ+ ಅದನು+ ಅರಸು
ಪರಮಾಣು = ಸೂಕ್ಷ್ಮಾತಿ ಸೂಕ್ಷ್ಮ ಅಣುಗಳು // ಉಭಯವನು = ಎರಡನ್ನೂ // ಎಸಕದ = ಮಿನುಗುವಿಕೆಯ // ಅರಸು = ಹುಡುಕು.
Wed, 19 May 2021 - 04min - 48 - Mankutimmana - 580Tue, 18 May 2021 - 07min
- 47 - Mankutimmana Kagga - 665Thu, 13 May 2021 - 08min
- 46 - Mankutimmana Kagga - 6Tue, 11 May 2021 - 06min
- 45 - Mankutimmana Kagga - 340Sun, 09 May 2021 - 06min
- 44 - Mankutimmana Kagga - 176-177Thu, 06 May 2021 - 08min
- 43 - Mankutimmana Kagga - 891Wed, 05 May 2021 - 06min
- 42 - Mankutimmana Kagga - 135.136
ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ |
ವಿಶ್ವಕೇಂದ್ರವು ನೀನೆ, ನೀನೆಣಿಸಿದೆಡೆಯೆ ||
ನಿಶ್ವಸಿತ ಸಂಬಂಧ ನಿನಗಂ ದಿಗಂತಕಂ |
ಪುಷ್ಪವಾಗಿರು ನೀನು – ಮಂಕುತಿಮ್ಮ. || 136
ವಿಶ್ವಪರಿಧಿಯದೆಲ್ಲೊ = ವಿಶ್ವದ + ಪರಿಧಿ+ ಅದು + ಎಲ್ಲೊ // ಸೂರ್ಯಚಂದ್ರರಿನಾಚೆ = ಸೂರ್ಯ+ಚಂದ್ರರಿನ+ ಆಚೆ // ನೀನೆಣಿಸಿದೆಡೆಯೆ = ನೀನು + ಎಣಿಸಿದ + ಎಡೆಯೆ, ನಿಶ್ವಸಿತ = ಉಸಿರಾಡುವ // ದಿಗಂತ = ಆಕಾಶದ ವ್ಯಾಪ್ತಿ,
ಸಂಪೂರ್ಣ ಗೋಳದಲಿ ನೆನೆದೆಡೆಯೆ ಕೇಂದ್ರವಲ |
ಕಂಪಿಸುವ ಕೇಂದ್ರ ನೀಂ ಬ್ರಹ್ಮ ಕಂದುಕದಿ ||
ಶಂಪಾತರಂಗವದರೊಳು ತುಂಬಿ ಪರಿಯುತಿದೆ |
ದಂಬೋಳಿ ನೀನಾಗು – ಮಂಕುತಿಮ್ಮ || 135
ನೆನೆದೆಡೆಯೆ = ನೆನೆದ +ಎಡೆಯೆ // ಶಂಪಾತರಂಗವದರೊಳು = ಶಂಪಾತರಂಗವು + ಅದರೊಳು
ಶಂಪಾತರಂಗ= ಮಿಂಚಿನ ಅಲೆಗಳು // ದಂಬೋಳಿ = ವಜ್ರಾಯುಧ.
Tue, 04 May 2021 - 07min - 41 - Mankutimmana Kagga - 71 - 72 - 73
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು |
ಆವನಾ ಬಂಧುತೆಯ ಜಡೆಯ ಬಿಡಿಸುವನು? ||
ಜೀವ ಜೀವಕೆ ನಂಟು ಜಡ ಚೇತನಕೆ ನಂಟು |
ಆವುದದಕಂಟಿರದು? – ಮಂಕುತಿಮ್ಮ|| 72
ವಿಶ್ವದಲಿ = ಜಗತ್ತಿನಲಿ, ನೋಡಲೆಲ್ಲರೆಲ್ಲರ = ನೋಡಲು+ಎಲ್ಲರ+ಎಲ್ಲರ, ನತು + ಬಾಂಧವ್ಯ, ಆವನಾ = ಯಾರು, ಬಂಧುತೆಯ=ಈಬಂಧನದ,
ಆವುದದಕಂಟಿರದು = ಯಾವುದಕ್ಕೆ ಅಂಟಿರದು?
ತರಣಿ ಕಿರಣದ ನಂಟು ಗಗನ ಸಲಿಲದ ನಂಟು |
ಧರಣಿ ಚಲನೆಯ ನಂಟು ಮರುತನೊಳ್ ನಂಟು ll
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ |
ಕಿರಿದು ಪಿರಿದೊಂದಂಟು – ಮಂಕುತಿಮ್ಮ || 71
ತರಣಿ = ಸೂರ್ಯ ಸಲಿಲ = ನೀರು, ಮರುತ = ಗಾಳಿ, ಕಿರಿದು = ಸಣ್ಣದು, ಪಿರಿದು = ದೊಡ್ಡದು.
ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ |
ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ||
ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ |
ಒಂಟಿಸಿಕೊ ಜೀವನವ – ಮಂಕುತಿಮ್ಮ || 73
Sun, 02 May 2021 - 08min - 40 - Mankutimma Kagga - 461 and 462Tue, 27 Apr 2021 - 07min
- 39 - Mankutimmana Kagga - 735-736Thu, 01 Apr 2021 - 08min
- 38 - Mankutimmana Kagga - 908 - 909
ಮಗುವಾಗಿ ಬೊಂಬೆಗೆಂದತ್ತು ಪಿರಿಯರ ಕಾಡಿ ।
ಜಗದುಣಿಸುಗಳನುಂಡು ಬೆಳೆದವಂ ತಾನೆ ।।
ಮಗುಗಳನು ಬೆಳಸುತ್ತ ಮನೆಯನಾಳುವವೋಲು ।
ಜಗವನಾಳ್ವನು ಜಾಣ – ಮಂಕುತಿಮ್ಮ || 909
ಬೊಂಬೆಗಂದತ್ತು=ಬೊಂಬೆಗೆ+ಅಂದು+ಅತ್ತು, ಜಗದುಣಿಸುಗಳನುಂಡು=ಜಗದ+ಉಣಿಸುಗಳನು+ಉಂಡು, ಮನೆಯನಾಳುವವೋಲು=ಮನೆಯನು+ಆಳುವ+ಓಲು, ಜಗವನಾಳ್ವನು=ಜಗವನು+ಆಳ್ವನು,
ಪಿರಿಯರ =ಹಿರಿಯರ, ಉಣಿಸುಗಳನು=ತಿಂಡಿಗಳನು, ಓಲು=ಹಾಗೆ
ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ ।
ನಿಜಕುಕ್ಷಿ ಚಿಂತೆಯೇಂ ಮೊದಲು ಮನೆತಾಯ್ಗೆ ।।
ಭುಜಿಪ ಪತಿಸುತರೊಪ್ಪ ತುಪ್ಪವವಳೂಟಕ್ಕೆ ।
ಭಜಿಸು ನೀನಾ ವ್ರತವ – ಮಂಕುತಿಮ್ಮ ।। 908
Wed, 31 Mar 2021 - 07min - 37 - Mankutimmana Kagga - 226
ಉಸಿರವೊಲನುಕ್ಷಣಂ ಪುರುಶನೊಳವೊಗುತವನ
ಪೊಸಬನಂಗೆಯ್ದು ದೈವಿಕಸತ್ವಮವನುಂ
ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ
ಬೆಸಸುತಿಹುದೇಗಳುಂ – ಮಂಕುತಿಮ್ಮ || 226
ಉಸಿರವೊಲನುಕ್ಷಣಂ = ಉಸಿರ+ಒಲು+ಅನುಕ್ಷಣಂ// ಪುರುಶನೊಳವೊಗುತವನ = ಪುರುಷನ+ಒಳ+ಒಗುತ +ಅವನ // ದೈವಿಕಸತ್ವಮವನುಂ = ದೈವಿಕಸತ್ವವಂ + ಅವನುಂ// ಬೆಸಸುತಿಹುದೇಗಳುಂ = ಬೆಸಸುತಿಹುದು+ ಏಗಳುಂ ಬೆಸಸುತಿಹುದು= ಬೆಸೆಯುತಿಹುದು // ಏಗಳುಂ = ಯಾವಾಗಲೂ
Sun, 28 Mar 2021 - 06min - 36 - Mankutimmana Kagga - 255Thu, 25 Mar 2021 - 06min
- 35 - Mankutimmana Kagga - 466Wed, 24 Mar 2021 - 06min
- 34 - Mankutimma Kagga - 41
ಕದಕಗಳಿಯನು ಬಿಗಿದು ಬೊಮ್ಮ ಗುಡಿಯಲಿರಲಿ
ಅದರ ಕೀಲ್ಕುಂಚಿಕೆಯ ಹೊರಕೆಸೆಯೇ ಸಾಕು
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು
ಒದವಿಪರು ದಿಟದರಿವ – ಮಂಕುತಿಮ್ಮ? 41ಕದ – ಬಾಗಿಲು, ಅಗಳಿ = ಚಿಲಕ, ಕೀಲ್ಕುಂಚಿಕೆ = ಬೀಗದ ಕೈ, ಪದವಾಕ್ಯವಿದರು = ಪದ, ವಾಕ್ಯ, ವ್ಯಾಕರಣ ಇತ್ಯಾದಿಗಳನ್ನರಿತ ಪಂಡಿತರು, ವಾದ = ಚರ್ಚೆ, ಗಡಣೆ = ಆಡಂಬರ, ಒದವಿಪರು=ಸಹಾಯಮಾಡುತ್ತಾರೆ, ದಿಟದರಿವ= ಸತ್ಯವನ್ನು ಅರಿಯುವ.
ಕದಕೆ + ಅಗಳಿಯನು = ಕದಕಗಳಿಯನು, ಪದ+ ವಾಕ್ಯ+ವಿದರು+ಆಗ = ಪದವಾಕ್ಯವಿದರಾಗ,
Mon, 22 Mar 2021 - 06min - 33 - Mankutimmana Kagga - 388Fri, 19 Mar 2021 - 06min
- 32 - Mankutimmana Kagga - 868Thu, 18 Mar 2021 - 06min
- 31 - Mankutimmana Kaggas - done in the last 3 weeksWed, 17 Mar 2021 - 07min
- 30 - Mankutimmana Kagga - 884Tue, 16 Mar 2021 - 06min
- 29 - Mankutimmana Kagga - 404Mon, 15 Mar 2021 - 05min
- 28 - Mankutimmana Kagga - 530Thu, 11 Mar 2021 - 05min
- 27 - Mankutimmana Kagga - 680
ಉಂಡಾತನುಣುತಿರುವರನು ಕಾಣ್ಬ ನಲವಿಂದ ।
ಪಂಡಿತನು ವಿಧ್ಯಾರ್ಥಿಗಳಿಗೊರೆವ ನಯದಿಂ ॥
ಕಂಡು ಲೋಕವನು ಸಂತೈಸುತಿರುವಂ ಜ್ಞಾನಿ ।
ಕಂಡೆಲ್ಲರೊಳು ತನ್ನ – ಮಂಕುತಿಮ್ಮ || 680
ಉಂಡಾತನುಣುತಿರುವರನು=ಉಂಡಾತ +ಉಣುತ+ಇರುವರನು, ವಿಧ್ಯಾರ್ಥಿಗಳಿಗೊರೆವ=ವಿದ್ಯಾರ್ಥಿಗಳಿಗೆ+ಒರೆವ, ಸಂತೈಸುತಿರುವಂ=ಸಂತೈಸುತ+ಇರುವ, ಕಂಡೆಲ್ಲರೊಳು=ಕಂಡು+ಎಲ್ಲರೊಳು.
ಕಾಣ್ಬ=ನೋಡುವ, ನಲವಿಂದ=ಪ್ರೀತಿಯಿಂದ, ಒರೆವ=ತಿಳಿಸುವ, ನಯದಿಂ=ನಯ ಮತ್ತು ನಾಜೂಕಿನಿಂದ, ಸಂತೈಸುತ=ಸಾಂತ್ವನವನ್ನು ಹೇಳುತ.
Tue, 09 Mar 2021 - 06min - 26 - Mankutimmana Kagga - 571
ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು? ।
ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು? ।।
ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ ।
ಅನಲನೆಲ್ಲರೊಳಿಹನು – ಮಂಕುತಿಮ್ಮ ।। 571
ನಿನಗಿರದ= ನಿನಗೆ+ಇರದ, ವಾಲ್ಮೀಕಿಗೆಂತಾಯ್ತು=ವಾಲ್ಮೀಕಿಗೆ+ಎಂತು+ಆಯ್ತು, ಮುನಿಕವಿತೆಗೆಂತು+ಮುನಿಕವಿತೆಗೆ+ಎಂತು, ನಿನ್ನೆದೆಯೊಳೆಡೆಯಾಯ್ತು= ನಿನ್ನ+ಎದೆಯೊಳು+ಎಡೆಯಾಯ್ತು,
ಘನಮಹಿಮನೊಳ್=ಘನ+ಮಹಿಮನ+ಒಳ್, ಜ್ವಲಿಸುತಿತರರೊಳು=ಜ್ವಲಿಸುತ+ಇತರರೊಳು,ಅನಲನೆಲ್ಲರೊಳಿಹನು=ಅನಲನು+ಎಲ್ಲರೊಳು+ಇಹನು.
Sun, 07 Mar 2021 - 06min - 25 - Mankutimmana Kagga - 523Thu, 04 Mar 2021 - 06min
- 24 - Mankutimmana Kagga - 506Wed, 03 Mar 2021 - 07min
- 23 - Mankutimmana Kagga - 907Fri, 26 Feb 2021 - 06min
- 22 - Mankutimmana Kagga - 304Thu, 25 Feb 2021 - 06min
- 21 - Mankutimmana Kagga - 268Wed, 24 Feb 2021 - 06min
- 20 - Mankutimmana Kagga 421Tue, 23 Feb 2021 - 09min
- 19 - Mankutimmana Kagga - 707Mon, 22 Feb 2021 - 06min
- 18 - Mankutimmana Kagga - 16-17Sat, 20 Feb 2021 - 06min
- 17 - Mankutimmana Kagga - 77Thu, 18 Feb 2021 - 05min
- 16 - Mankutimmana Kagga - 161
ವಿಧಿಯ ಹೊರೆಗಳನು ತಪ್ಪಿಸಿಕೊಳ್ಳುವನೆಲ್ಲಿಹನು I
ಬೆದರಿಕೆಯನದರಿಂದ ನೀಗಿಪನು ಸಖನು II
ಎದೆಯನುಕ್ಕಾಗಿಸಾನಿಸು ಬೆನ್ನ – ತುಟಿಯ ಬಿಗಿ I
ವಿಧಿಯಗಸ , ನೀಂ ಕತ್ತೆ – ಮಂಕುತಿಮ್ಮ || 161
ತಪ್ಪಿಸಿಕೊಳ್ಳುವನೆಲ್ಲಿಹನು = ತಪ್ಪಿಸಿಕೊಳ್ಳುವನು + ಎಲ್ಲಿಹನು // ಬೆದರಿಕೆಯನದರಿಂದ = ಬೆದರಿಕೆಯನು + ಅದರಿಂದ // ಎದೆಯನುಕ್ಕಾಗಿಸಾನಿಸು = ಎದೆಯನು + ಉಕ್ಕಾಗಿಸಿ + ಆನಿಸು
ನೀಗಿಪನು = ಹೋಗಲಾಡಿಸುವನು // ಸಖನು = ಸ್ನೇಹಿತನು
Wed, 17 Feb 2021 - 06min - 15 - Mankutimmana Kagga - 441Sun, 14 Feb 2021 - 05min
- 14 - Mankutimmana Kagga - 381Fri, 12 Feb 2021 - 07min
- 13 - Mankutimmana Kagga - 890Tue, 09 Feb 2021 - 07min
- 12 - Mankutimmana Kagga - 699Thu, 04 Feb 2021 - 06min
- 11 - Mankutimmana Kagga - 170Tue, 02 Feb 2021 - 06min
- 10 - Mankutimmana Kagga - 576Mon, 01 Feb 2021 - 07min
- 9 - Mankutimmana Kagga - 581-582Sat, 30 Jan 2021 - 06min
- 8 - Manakutimmana Kagga - 849Thu, 28 Jan 2021 - 07min
- 7 - Mankutimma - 923 - 922Wed, 27 Jan 2021 - 07min
- 6 - Mankutimmana Kagga - 430Tue, 26 Jan 2021 - 09min
- 5 - Mankutimmana Kagga - 566Mon, 25 Jan 2021 - 08min
- 4 - Mankutimmana Kagga - 558Sun, 24 Jan 2021 - 08min
- 3 - Mankutimmana Kagga - 333Fri, 22 Jan 2021 - 09min
- 2 - Mankutimmana Kagga - 814Thu, 21 Jan 2021 - 06min
- 1 - Mankutimma Kagga - 827Wed, 20 Jan 2021 - 07min
Podcast simili a <nome>
- Global News Podcast BBC World Service
- El Partidazo de COPE COPE
- Herrera en COPE COPE
- The Dan Bongino Show Cumulus Podcast Network | Dan Bongino
- Es la Mañana de Federico esRadio
- La Noche de Dieter esRadio
- Hondelatte Raconte - Christophe Hondelatte Europe 1
- Dateline NBC NBC News
- 財經一路發 News98
- La rosa de los vientos OndaCero
- Más de uno OndaCero
- La Zanzara Radio 24
- L'Heure Du Crime RTL
- El Larguero SER Podcast
- Nadie Sabe Nada SER Podcast
- SER Historia SER Podcast
- Todo Concostrina SER Podcast
- 安住紳一郎の日曜天国 TBS RADIO
- TED Talks Daily TED
- アンガールズのジャンピン[オールナイトニッポンPODCAST] ニッポン放送
- 辛坊治郎 ズーム そこまで言うか! ニッポン放送
- 飯田浩司のOK! Cozy up! Podcast ニッポン放送
- 吳淡如人生實用商學院 吳淡如
- 武田鉄矢・今朝の三枚おろし 文化放送PodcastQR